ದೇವತಾ ಮನುಷ್ಯ ೧೯೮೮ ರ ಭಾರತೀಯ ಕನ್ನಡ ಚಿತ್ರವಾಗಿದ್ದು, ಇದನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್, ಗೀತಾ, ಕೆ.ಎಸ್.ಅಶ್ವಥ್ ಮತ್ತು ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ತನ್ನ ಹಾಡುಗಳಿಗೆ ಪ್ರಸಿದ್ಧವಾಗಿದ್ದು, ಈ ಹಾಡುಗಳನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ ಯಶಸ್ಸನ್ನು ಕಂಡಿತು. ಇದು ರಾಜ್ ಕುಮಾರ್ ಅವರ ೨೦೦ ನೇ ಚಲನಚಿತ್ರವಾಗಿತ್ತು.